ಬೆಂಗಳೂರು ಸುತ್ತಿ, ಗವಿಗಂಗಾಧರೇಶ್ವರ ದರ್ಶನ ಪಡೆದ ಭಾರತದಲ್ಲಿನ ಅಮೆರಿಕ ರಾಯಭಾರಿ..!
ಬೆಂಗಳೂರು: ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎಚ್.ಇ. ಸರ್ಜಿಯೊ ಗೋರ್, ಬೆಂಗಳೂರು ಸುತ್ತಿ, ಗವಿಗಂಗಾಧರೇಶ್ವರ ದರ್ಶನ ಪಡೆದಿದ್ದು, ಬೆಂಗಳೂರಿನ ಭೇಟಿ, ಆನಂದವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋರ್ ಅವರ ನಗರ ಸುತ್ತಾಟಕ್ಕೆ ಸಂಸದ ತೇಜಸ್ವಿ ಸೂರ್ಯ ಸಹಭಾಗಿಯಾಗಿದ್ದು, ಈ ಕುರಿತು ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಟೊ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಾಯಭಾರಿ ಗೋರ್ ಅವರು ತಡರಾತ್ರಿ ತೇಜಸ್ವಿಸೂರ್ಯ ಜತೆಗೆ ಆಟೋದಲ್ಲಿ ಸುತ್ತಾಡಿದ್ದಾರೆ. ಅಲ್ಲದೆ, ಇಂದಿರಾನಗರದ ಫಿಲ್ಟರ್ ಕಾಫಿಯಲ್ಲಿ ಮಸಾಲ ದೋಸೆ, ಇಡ್ಲಿ ಮತ್ತು ಕಾಫಿ ಆಸ್ವಾದಿಸಿ ಖುಷಿಪಟ್ಟಿದ್ದಾರೆ….

