vishwapragathinews@gmail.com

ಕುರಿ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ದಂಪತಿ ಸಾವು

ರಾಮನಗರ : ಕುರಿಗಳ ಮೈ ತೊಳೆಯಲು ಹೋದ ದಂಪತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗುಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಣ(71) ಮತ್ತು ಜಯಮ್ಮ(65) ಮೃತಪಟ್ಟ ವೃದ್ದ ದಂಪತಿಗಳಾಗಿದ್ದಾರೆ. ಇಬ್ಬರೂ ಗುರುವಾರ ಮದ್ಯಾಹ್ನ ತಾವು ಸಾಕಿದ್ದ ಕುರಿಗಳನ್ನು ಮೇಯಲು ಬಿಟ್ಟು, ನಂತರ ಪಕ್ಕದಲ್ಲಿಯೇ ಇದ್ದ ಕೆರೆಗೆ ಮೈ ತೊಳೆಯಲು ಮುಂದಾಗಿದ್ದಾರೆ. ಈ ವೇಳೆ ಆಳವಾದ ನೀರಿನಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಿತು.  ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ…

Read More

ಕೊಟ್ಟ ಮಾತಿನಂತೆ ನಡೆದರೆ ರಾಜಕಾರಣದಲ್ಲಿ ಶಾಶ್ವತವಾಗಿ ಇರಬಹುದು: ಡಿಕೆ ಸುರೇಶ್‌

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ತುಂಬಿದ್ದು, ಈ ನಡುವೆ ಒಳ ರಾಜಕೀಯ ಗುದ್ದಾಟ ಹೆಚ್ಚಾಗಿದೆ. ಇದರ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಜಿ ಸಂಸದ ಡಿಕೆ ಸುರೇಶ್‌ ಅವರು, ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ತುಂಬಿದ ದಿನದಂದೇ ‘ಕೊಟ್ಟ ಮಾತಿನಂತೆ ನಡೆಯಬೇಕು’ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಜಿ ಸಂಸದ, ಬಮೂಲ್ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ ನಾಯಕ ಡಿ.ಕೆ…

Read More

ವಿಶ್ವದ ಬೆಸ್ಟ್ ನಗರಗಳಲ್ಲಿ ಬೆಂಗಳೂರಿಗೆ 29ನೇ ಸ್ಥಾನ

ವಿಶ್ವದ 100 ಬೆಸ್ಟ್ ನಗರಗಳ ಪಟ್ಟಿ ಪ್ರಕಟ; ಲಂಡನ್ ನಂ.1, ಭಾರತದ 4 ಪ್ರಮುಖ ನಗರಗಳು 100ರ ಒಳಗೆ ಸ್ಥಾನ ಪಡೆದಿದೆ. ನಮ್ಮ ಬೆಂಗಳೂರು 29ನೇ ಸ್ಥಾನ ಪಡೆದಿದೆ. ಬೆಂಗಳೂರು: ಪ್ರತಿ ವರ್ಷ ವಿಶ್ವದ ಪ್ರಮುಖ ನಗರಗಳ ರ್ಯಾಂಕಿಂಗ್ ಪ್ರವಾಸಿಗರ ಪ್ರಯಾಣಕ್ಕೆ ಮತ್ತಷ್ಟು ಉತ್ಸಾಹ ಮೂಡಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ರೆಸೋನೆನ್ಸ್ ಕನ್ಸಲ್ಟೆನ್ಸಿ ವಿಶ್ವದ ಬೆಸ್ಟ್ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಬರೋಬ್ಬರಿ 270 ನಗರಳನ್ನು ಅಲ್ಲಿನ ಜೀವನ ಮಟ್ಟ, ಆದಾಯ, ಅವಕಾಶ, ಸಾಂಸ್ಕೃತಿಕ ಹಿರಿಮೆ,…

Read More

ಅತೀ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ

ಬೆಂಗಳೂರು: ದೇಶದಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಸಿಟಿಗಳಲ್ಲಿ ನಮ್ಮ ಬೆಂಗಳೂರು ಕೂಡ ಒಂದು ಪ್ರಮುಖವಾಗಿ ರಿಯಲ್ ಎಸ್ಟೇಟ್ ಬೂಸ್ಟ್ ಆಗುವಂತಹ ಮತ್ತೊಂದು ಸುದ್ದಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಮೇಲೆ ವಿವಿಧ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವಾಗಿದೆ. ಇದೀಗ ಬೆಂಗಳೂರಿನ ಆಡಳಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ / ಬೆಂಗಳೂರು ವ್ಯಾಪ್ತಿಗೆ 329.99…

Read More

ಬಸವನಗುಡಿಯ ಕಡಲೆಕಾಯಿ ಪರಿಷೆ; ನ.17 ರಿಂದ 21ರವರೆಗೆ ಪರಿಷೆ

ಬೆಂಗಳೂರು: ಸಿಲಿಕಾನ್ ಸಿಟಿಯ ಅದ್ದೂರಿ ಜಾತ್ರೆಗಳಲ್ಲಿ ಒಂದಾದ ಕಡಲೆ ಕಾಯಿ ಪರಿಷೆಯು ಈ ಬಾರಿ ವಿಜೃಂಭಣೆಯಿಂದ ಜರುಗಲಿದೆ. ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಸೋಮವಾರ (ಇಂದು ನ.17) ಅಧಿಕೃತ ಚಾಲನೆ ದೊರೆಯಲಿದೆ. ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯವು ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳೊಂದಿಗೆ ಕಂಗೊಳಿಸುತ್ತಿವೆ. ಸೋಮವಾರ (ನ. 17) ಬೆಳಗ್ಗೆ 11 ಗಂಟೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪರಿಷೆಗೆ ಚಾಲನೆ ನೀಡಲಿದ್ದಾರೆ.ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ…

Read More
ರಾಷ್ಟ್ರೀಯ ಪತ್ರಿಕಾ ದಿನಾಚರಣೆ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ

1966 ರಲ್ಲಿ ರಚನೆಯಾದ ಭಾರತೀಯ ಪತ್ರಿಕಾ ಮಂಡಳಿಯ ಸ್ಥಾಪನೆಯ ಸ್ಮರಣಾರ್ಥ ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ರಾಷ್ಟ್ರೀಯ ಪತ್ರಿಕಾ ದಿನವು ಪತ್ರಿಕಾ ಸ್ವಾತಂತ್ರ್ಯ ಮತ್ತು ಸಮಾಜದ ಕಡೆಗೆ ಅದರ ಜವಾಬ್ದಾರಿಗಳನ್ನು ಸಂಕೇತಿಸುತ್ತದೆ. ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು, ಎಲ್ಲಾ ಸಂದರ್ಭಗಳಲ್ಲಿಯೂ ಸತ್ಯವನ್ನು ಹೊರತರುತ್ತಾರೆ.ಭಾರತೀಯ ಪತ್ರಿಕಾ ಮಂಡಳಿಯು ಸಹ ಈ ದಿನದಂದು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇಂದು ವಿಶ್ವದ ಸುಮಾರು 50 ದೇಶಗಳು ಪತ್ರಿಕಾ ಮಂಡಳಿ ಅಥವಾ ಮಾಧ್ಯಮ ಮಂಡಳಿಯನ್ನು ಹೊಂದಿವೆ. ಪತ್ರಿಕಾ ಸ್ವಾತಂತ್ರ್ಯವನ್ನು…

Read More

ಜೀವನವನ್ನೇ ವೃಕ್ಷಗಳ ಮಡಿಡಲ್ಲಿ ಕಳೆದ ತಾಯಿ `ಸಾಲು ಮರದ ತಿಮ್ಮಕ್ಕ’

ತಾವು ಬೆಳೆಸಿದ ಮರಗಳೇ ನನ್ನ ಮಕ್ಕಳು’ ಎಂದು ಪೋಷಿಸಿದ್ದ ವೃಕ್ಷಮಾತೆ `ಸಾಲು ಮರದ ತಿಮ್ಮಕ್ಕ’ ಪ್ರತಿಯೊಬ್ಬ ಹಸಿರು ಪ್ರೇಮಿಯ ಪ್ರಿತಿಯ ಮಾತೆ, ದೇಶದಲ್ಲಿಯೇ ಸಾಲು ಮರದ ತಿಮ್ಮಕ್ಕ ಎಂದೇ ಪ್ರಸಿದ್ದಯಾಗಿರುವ ವೃಕ್ಷ ಮಾತೆ ತಮ್ಮ ಜೀವನವನ್ನು ಅಂತಿಮಗೊಳಿಸಿದ್ದಾರೆ, ಆದರೆ ಪ್ರತಿಯೊಬ್ಬ ಹಸಿರು ಪ್ರೇಮಿಗಳಲ್ಲಿ ಅಚ್ಚಳಿಯದ ಹಸಿರಾಗಿ ಉಳಿಯಲಿದ್ದಾರೆ… ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114)ಅವರು ತೀವ್ರ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಲುಮರದ ತಿಮ್ಮಕ್ಕ…

Read More

ಗಾಳಿ ಆಂಜನೇಯ ಸ್ವಾಮಿ, ಭಕ್ತರ ಆರಾಧ್ಯ ದೈವ

ವಿಶ್ವ ಭೂಪಟದಲ್ಲಿ ಹೆಸರು ವಾಸಿ ಆಗಿರುವ ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮಂತ ವಾಯುಪುತ್ರನಾಗಿರುವುದರಿಂದ ಇಲ್ಲಿನ ಹನುಮ ದೇವಸ್ಥಾನಕ್ಕೆ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಭಕ್ತಿಯಿಂದ ದಿನನಿತ್ಯ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಚೆನ್ನಪಟ್ಟಣದ ಶ್ರೀ ವ್ಯಾಸರಾಯರು 1425ರಲ್ಲಿ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಮುಂದೆ ಸುಂದರ ಹಾಗೂ ಎತ್ತರವಾದ ಗೋಪುರವಿದೆ….

Read More