vishwapragathinews@gmail.com

ಬೆಂಗಳೂರು ಸುತ್ತಿ, ಗವಿಗಂಗಾಧರೇಶ್ವರ ದರ್ಶನ ಪಡೆದ ಭಾರತದಲ್ಲಿನ ಅಮೆರಿಕ ರಾಯಭಾರಿ..!

ಬೆಂಗಳೂರು: ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎಚ್‌.ಇ. ಸರ್ಜಿಯೊ ಗೋರ್‌, ಬೆಂಗಳೂರು ಸುತ್ತಿ, ಗವಿಗಂಗಾಧರೇಶ್ವರ ದರ್ಶನ ಪಡೆದಿದ್ದು, ಬೆಂಗಳೂರಿನ ಭೇಟಿ, ಆನಂದವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋರ್‌ ಅವರ ನಗರ ಸುತ್ತಾಟಕ್ಕೆ ಸಂಸದ ತೇಜಸ್ವಿ ಸೂರ್ಯ ಸಹಭಾಗಿಯಾಗಿದ್ದು, ಈ ಕುರಿತು ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಟೊ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಾಯಭಾರಿ ಗೋರ್‌ ಅವರು ತಡರಾತ್ರಿ ತೇಜಸ್ವಿಸೂರ್ಯ ಜತೆಗೆ ಆಟೋದಲ್ಲಿ ಸುತ್ತಾಡಿದ್ದಾರೆ. ಅಲ್ಲದೆ, ಇಂದಿರಾನಗರದ ಫಿಲ್ಟರ್‌ ಕಾಫಿಯಲ್ಲಿ ಮಸಾಲ ದೋಸೆ, ಇಡ್ಲಿ ಮತ್ತು ಕಾಫಿ ಆಸ್ವಾದಿಸಿ ಖುಷಿಪಟ್ಟಿದ್ದಾರೆ….

Read More

U19 World Cup 2026: 6ನೇ ಬಾರಿ ವಿಶ್ವಕಪ್ ಎತ್ತಿದ ಭಾರತ

ಭಾರತ ಅಂಡರ್-19 ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಈ ಮೂಲಕ ಯಂಗ್ ಟೀಮ್ ಇಂಡಿಯಾ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ 175 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ ದಾಖಲೆಯ ಮೊತ್ತವನ್ನು ಕಲೆ ಹಾಕಿತ್ತು. ಭಾರತ…

Read More

ಸಂಕ್ರಾಂತಿ ಹಬ್ಬದ ಪ್ರಯುಕ್ತ 10ಸಾವಿರ ಜನರಿಗೆ ಮತ್ತು ಪೌರ ಕಾರ್ಮಿಕ ಮಹಿಳೆಯರಿಗೆ ಕಬ್ಬು, ಎಳ್ಳು, ಬೆಲ್ಲ ವಿತರಣೆ

ಜಯನಗರ: ತಿಲಕ್ ನಗರ ವಾರ್ಡ್ ಎಲ್.ಐ.ಸಿ. ಕಾಲೋನಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹತ್ತು ಸಾವಿರ ಸಾರ್ವಜನಿಕರು ಮತ್ತು ಪೌರ ಕಾರ್ಮಿಕರಿಗೆ ಎಳ್ಳು-ಬೆಲ್ಲ ವಿತರಣೆ ಕಾರ್ಯಕ್ರಮ.ಮಾಜಿ ಆಡಳಿತ ಪಕ್ಷದ ನಾಯಕರು, ಜಯನಗರ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜುರವರು ಗೋಪೂಜೆ ಸಲ್ಲಿಸಿ ಕಬ್ಬು, ಎಳ್ಳು ವಿತರಿಸಿದರು. ಎನ್.ನಾಗರಾಜು ಅವರು ಮಾತನಾಡಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರ ಮಾರ್ಗದರ್ಶನ ಮತ್ತು ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿರವರ ನೇತೃತ್ವದಲ್ಲಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ…

Read More

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ಧೂರಿ ಉದ್ಘಾಟನೆ

ಬೆಂಗಳೂರು: ಸಿನಿಮಾ ಪ್ರಿಯರ ನೆಚ್ಚಿನ ಹಬ್ಬವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಹೂರ್ತ ನಿಗದಿಯಾಗಿದ್ದು, ಜನವರಿ 29ರಿಂದ ಫೆಬ್ರವರಿ 06ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದ್ದು, ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಅವರನ್ನು ಚಿತ್ರೋತ್ಸವದ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ. 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಉತ್ಸವವು…

Read More

ಚನ್ನಪಟ್ಟಣ ತಾಲ್ಲೂಕು ಪತ್ರಕರ್ತರ ಸಂಘಕ್ಕೆ ನಡೆದ ಚುನಾವಣೆ; ಅಧ್ಯಕ್ಷರಾಗಿ ಡಿ.ಎಂ.ಮಂಜುನಾಥ್ ಗೆಲುವು

ಚನ್ನಪಟ್ಟಣ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾಸ್ತಮ್ಮವಾಣಿ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಸಂಪಾದಕ ಡಿ.ಎಂ.ಮಂಜುನಾಥ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ 2ನೇ ಭಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ನಡೆಸಲಾಯಿತು. ಒಟ್ಟು 37 ಮತಗಳಲ್ಲಿ 37 ಮತಗಳು ಚಲಾವಣೆಗೊಂಡಿದ್ದು, ಶೇ.100ರಷ್ಟು ಮತದಾನವಾಯಿತು. ಅಧ್ಯಕ್ಷ ಸ್ಥಾನಕ್ಕೆ ಡಿ.ಎಂ. ಮಂಜುನಾಥ್ ಅವರು 25 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ…

Read More

ಕನ್ನಡ ಡಿಂಡಿಮ -2025 ಪ್ರಶಸ್ತಿಯನ್ನು ಪದ್ಮಭೂಷಣ ಡಾ||ರಾಜ್ ಕುಮಾರ್ ರವರಿಗೆ , ನಟ ಶಿವರಾಜ್ ಕುಮಾರ್ ರವರಿಂದ ಸ್ವೀಕಾರ

ಬೆಂಗಳೂರು: ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕನ್ನಡ ಡಿಂಡಿಮ ಪ್ರತಿಷ್ಠಾನ ವತಿಯಿಂದ ಸಹಸ್ರಾರು ಗಾಯಕರಿಂದ ಕನ್ನಡ ಹಾಡುಗಳು ಪಂಚ ಪ್ರಕಾರಗಳಲ್ಲಿ ಕನ್ನಡ ನಾಡ ಗೀತೆಗಳು, ದಾಸರ ಪದಗಳು, ಶಿವಶರಣರ ಹಾಡುಗಳು, ಕಗ್ಗ ತತ್ವಪದಗಳು, ಜಾನಪದಗಳ ‘ಸಹಸ್ರ ಕಂಠ ಗಾನ ವೈಭವ’ ಎಂಬ ಕಾರ್ಯಕ್ರಮವು ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಮತ್ತು ‘ಕನ್ನಡ ಡಿಂಡಿಮ 2025 ಪ್ರಶಸ್ತಿಯನ್ನುಪದ್ಮಭೂಷಣ ಡಾ|| ರಾಜ್ ಕುಮಾರ್‌ರವರಿಗೆ ಮರಣೋತ್ತರವಾಗಿ ನೀಡಲಾಗುವುದು. ಪ್ರಶಸ್ತಿ ಪ್ರಧಾನಶ್ರೀ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ಡಾ|| ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಅವಧೂತ…

Read More

ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸಲು ಗಡುವು

ಬೆಳಗಾವಿ/ಬೆಂಗಳೂರು: ಆಸ್ಪತ್ರೆ, ಮನರಂಜನಾ ಕೇಂದ್ರ, ಹೋಟೆಲ್‌, ವಾಣಿಜ್ಯ , ಕೈಗಾರಿಕೆ, ಟ್ರಸ್ಟ್‌, ಸೇರಿದಂತೆ ಮತ್ತಿತರ ಕಡೆ ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸಲು 15 ದಿನಗಳಿಂದ 1 ತಿಂಗಳೊಳಗೆ ರಾಜ್ಯಾದ್ಯಂತ ಕಡ್ಡಾಯ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕನ್ನಡ ಕಡ್ಡಾಯ ನಾಮಫಲಕ ಅನುಷ್ಠಾನ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ರೀತಿ ನಿಯಮಗಳನ್ನು ರೂಪಿಸಿ ಕಳುಹಿಸಿಕೊಟ್ಟಿದ್ದೇವೆ. 15 ದಿನಗಳಿಂದ…

Read More

ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು 24 ಗಂಟೆಗಳ ಸೇವೆ: ದಿನೇಶ್ ಗುಂಡೂರಾವ್

ಬೆಳಗಾವಿ: ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಗಳ ಸೇವೆಯ ಖಾತ್ರಿ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕುಷ್ಟಗಿಯ ಬಿಜೆಪಿ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಗತ್ಯ ಸಂಖ್ಯೆಯ ವೈದ್ಯರು, ತಜ್ಞರು ಮತ್ತು ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ಮೂಲಕ ಈ ಗುರಿ ಸಾಧಿಸಲಾಗುತ್ತಿದೆ ಎಂದರು. ಪ್ರತಿ ತಾಲೂಕು ಆಸ್ಪತ್ರೆಯು 24 ಗಂಟೆ…

Read More

ರಾಜ್ಯದಲ್ಲಿರುವ ಅನಧಿಕೃತ ಪಂಪ್‌ಸೆಟ್‌ಗಳಿಗೆ ಕಡಿವಾಣ : ಡಿಕೆಶಿ

ಬೆಳಗಾವಿ: ನೀರಾವರಿ ಯೋಜನೆಗಳಲ್ಲಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಅಡ್ಡಿಯಾಗಿರುವ ಅನಧಿಕೃತ ಪಂಪ್‌ ಸೆಟ್‌ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸುವುದಾಗಿ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರದಲ್ಲಿ ಆಡಳಿತ ಪಕ್ಷದ ಶಾಸಕ ಜಿ.ಟಿ.ಪಾಟೀಲ್‌ ಘಟಪ್ರಭಾ ನದಿಯ ಹಿಡಕಲ್‌ ಜಲಾಶಯದಿಂದ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ. ನಾಲೆಗಳನ್ನು ದುರಸ್ತಿ ಮಾಡಬೇಕಿದೆ, ಇನ್ನು ಎಷ್ಟು ವರ್ಷ ನಾವು ನೀರಿನಿಂದ ವಂಚಿತವಾಗಬೇಕು? ಸುಮಾರು 15 ಸಾವಿರ ಪಂಪ್‌ ಸೆಟ್‌ಗಳನ್ನು ಅಕ್ರಮವಾಗಿ ಅಳವಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ…

Read More

ಎರಡಂಕಿ ಮೊತ್ತಕ್ಕೆ ಆಫ್ರಿಕಾ ಆಲೌಟ್; ಭಾರತಕ್ಕೆ ಭಾರಿ ಅಂತರದ ಜಯ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 101 ರನ್‌ಗಳ ಭಾರಿ ಜಯ ಸಾಧಿಸಿದೆ. ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾವನ್ನು ಕೇವಲ 74 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತಂಡ ಹೊಸ ದಾಖಲೆ ಬರೆಯಿತು. ಹಾರ್ದಿಕ್ ಪಾಂಡ್ಯ ಅರ್ಧಶತಕ ಹಾಗೂ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಟೀಂ ಇಂಡಿಯಾ ಗೆಲುವಿನ ಆರಂಭ ಪಡೆದುಕೊಂಡಿದೆ….

Read More