ಮಿಂಚಿ ಮರೆಯಾದ ಕನ್ನಡ ನಟ ಎಂ.ಎಸ್‌. ಉಮೇಶ್‌

Oplus_16908288

ಬೆಂಗಳೂರು: ಕನ್ನಡ ನಟ ಎಂ.ಎಸ್‌. ಉಮೇಶ್‌. ವಿಭಿನ್ನ ಹಾವಭಾವ, ಹಾಸ್ಯಭರಿತ ಸಂಭಾಷಣೆಗಳ ಮೂಲಕ ಚಿರಪರಿಚಿತರಾಗಿದ್ದ ಎಂ.ಎಸ್‌.ಉಮೇಶ್‌ ಇಹಲೋಕ ತ್ಯಜಿಸಿದ್ದಾರೆ.

ಸ್ಯಾಂಡಲ್ವುಡ್ ಹಿರಿಯ ನಟ ಎಂ.ಎಸ್. ಉಮೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 80 ವರ್ಷ ವಯಸ್ಸಿನ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ಸುಮಾರು 359ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಎಂ.ಎಸ್. ಉಮೇಶ್ ಅವರು ಜನಪ್ರಿಯತೆ ಪಡೆದಿದ್ದರು. ಉಮೇಶ್ 4ನೇ ಹಂತದ ಲಿವರ್ ಕ್ಯಾನ್ಸರ್ ವಿರುದ್ಧ ಓರಾಡುತ್ತಿದ್ದರು. ಕಳೆದ ತಿಂಗಳು ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಲಿವರ್ನಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿತ್ತು. ಲಿವರ್ ಕ್ಯಾನ್ಸರ್ ಆಗಿ ಅದು ಬೇರೆ ಬೇರೆ ಅಂಗಗಳಿಗೆ ಹರಡಿದೆ ಎಂಬುದು ತಿಳಿದುಬಂದಿತ್ತು. ಆದ್ರೆ ಚಿಕಿತ್ಸೆ ಫಲಕಾರಿ ಆಗದೇ ನಿಧನರಾಗಿದ್ದಾರೆ.

ಇನ್ನು ಉಮೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅನೇಕ ಕಲಾವಿದರು ಹೋಗಿ ಮಾತನಾಡಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಮೈಸೂರಿನಲ್ಲಿ ಜನಿಸಿದ ಉಮೇಶ್ 1945 ರ ಏಪ್ರಿಲ್ 24 ರಂದು ಎ.ಎಲ್. ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿ ಮಗನಾಗಿ ಹುಟ್ಟಿ ಬೆಳೆದು ರಂಗಭೂಮಿ ಸೆಳೆತಕ್ಕೆ ಒಳಗಾಗಿದ್ದರು. 4 ನೇ ವಯಸ್ಸಿನಲ್ಲಿ ಕೆ. ಹಿರಣ್ಣಯ್ಯ ನಡೆಸುತ್ತಿದ್ದ ಜನಪ್ರಿಯ ರಂಗಭೂಮಿ ತಂಡ ಸೇರಿ ಬಾಲ ಕಲಾವಿದರ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಗುಬ್ಬಿ ವೀರಣ್ಣ ಅವರ ಕಂಪನಿ ಸೇರಿದ ಮೇಲೆ ಸಿನಿಮಾ ಅವಕಾಶಗಳು ಬರಲು ಆರಂಭವಾಗಿತ್ತು. ಅದೇ ಸಮಯದಲ್ಲಿ ಬಿ. ಆರ್ ಪಂತುಲು ಅವರ ‘ಮಕ್ಕಳರಾಜ್ಯ’ ಚಿತ್ರದ ಅವಕಾಶ ಸಿಕ್ಕಿತ್ತು.

ಅದಾದ ಬಳಿಕ 1976ರಲ್ಲಿ ತೆರೆಕಂಡ ಮೂರು ಕಥೆಗಳನ್ನೊಳಗೊಂಡ ಕಥಾಸಂಗಮ ಸಿನಿಮಾದಲ್ಲಿ ಮುನಿತಾಯಿ ಎನ್ನುವ ಕಥೆಯಲ್ಲಿ ಉಮೇಶ್ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು.ಅನುಪಮಾ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ, ಮೇಘ ಮಂದಾರ, ಆಕಸ್ಮಿಕ, ಸರ್ವರ್ ಸೋಮಣ್ಣ, ಮೇಘಮಾಲೆ, ನನ್ನಾಸೆಯ ಹೂವೆ, ಜಾಕಿ, ರ್‍ಯಾಂಬೊ, ಮುಸ್ಸಂಜೆ ಮಾತು, ಗೋಲ್‌ಮಾಲ್‌ ರಾಧಾಕೃಷ್ಣ, ಡೇರ್ ಡೆವಿಲ್ ಮುಸ್ತಫಾ, ಹಗಲುವೇಷ ಸೇರಿದಂತೆ ಇತ್ತೀಚಿನ ಸಿನಿಮಾಗಳಲ್ಲೂ ಉಮೇಶ್‌ ನಟಿಸಿದ್ದಾರೆ.

ಇನ್ನು ದ್ವಾರಕೀಶ್ ನಿರ್ಮಿಸಿ, ನಟಿಸಿದ್ದ ‘ಗುರು ಶಿಷ್ಯರು’ ಚಿತ್ರದಲ್ಲಿ ಖ್ಯಾತ ಹಾಸ್ಯನಟರ ದಂಡೇ ಇತ್ತು. ರಾಜಗುರು ಪೂರ್ಣಾನಂದಯ್ಯ ಶಿಷ್ಯರ ಗುಂಪಿನಲ್ಲಿ ಉಮೇಶ್ ಕೂಡ ಒಬ್ಬರಾಗಿದ್ದರು. ಸೋಮೇಶ್ವರ ಪಾತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದರು. ಈ ಚಿತ್ರದ ಎಲ್ಲಾ ಸನ್ನಿವೇಶಗಳು ಸೂಪರ್. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಉಮೇಶ್ ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆಯಮ್ ಗಾಡ್’ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು.

Leave a Reply

Your email address will not be published. Required fields are marked *