17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ಧೂರಿ ಉದ್ಘಾಟನೆ

Oplus_16908288

ಬೆಂಗಳೂರು: ಸಿನಿಮಾ ಪ್ರಿಯರ ನೆಚ್ಚಿನ ಹಬ್ಬವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಹೂರ್ತ ನಿಗದಿಯಾಗಿದ್ದು, ಜನವರಿ 29ರಿಂದ ಫೆಬ್ರವರಿ 06ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಈ ಬಾರಿಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ವಿಧಾನಸೌಧದ ಮುಂಭಾಗದ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದ್ದು, ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಅವರನ್ನು ಚಿತ್ರೋತ್ಸವದ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ.

17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಉತ್ಸವವು ‘ಮಹಿಳಾ ಸಬಲೀಕರಣ’ ಎಂಬ ವಿಶೇಷ ಥೀಮ್ ಹೊಂದಿರಲಿದೆ ಎಂದರು. ಚಿತ್ರೋತ್ಸವದ ಪ್ರದರ್ಶನಗಳು ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿ ಪೋಲಿಸ್‌ನ 11 ಸ್ಟೀನ್‌ಗಳಲ್ಲಿ ನಡೆಯಲಿವೆ. ಜೊತೆಗೆ ಡಾ. ರಾಜ್‌ಕುಮಾ‌ರ್ ಭವನ, ಕಲಾವಿದರ ಸಂಘ, ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಪ್ರದರ್ಶನವಿರುತ್ತದೆ.ಈ ಬಾರಿ 60ಕ್ಕೂ ಹೆಚ್ಚು ದೇಶಗಳ ಸುಮಾರು 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕಾನ್ಸ್, ಬರ್ಲಿನ್, ವೆನಿಸ್ ಮುಂತಾದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು ಹಾಗೂ ಆಸ್ಕ‌ರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ಅತ್ಯುತ್ತಮ ಚಿತ್ರಗಳು ವೀಕ್ಷಣೆಗೆ ಲಭ್ಯವಿರಲಿವೆ. ಪೊಲೆಂಡ್‌ನ ಖ್ಯಾತ ನಿರ್ದೇಶಕ ಅಂದ್ರೆ ವಾಜ್ಞಾ ಅವರ ಶತಮಾನೋತ್ಸವದ ಅಂಗವಾಗಿ ಅವರ ಚಿತ್ರಗಳ ವಿಶೇಷ ಪುನರಾವಲೋಕನ ಹಾಗೂ ಆಫ್ರಿಕನ್ ಸಿನಿಮಾಗಳ ಸರಣಿ ಪ್ರದರ್ಶನವೂ ಇರಲಿದೆ.

Leave a Reply

Your email address will not be published. Required fields are marked *