ಬೆಂಗಳೂರು: ಡಾ||ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕನ್ನಡ ಡಿಂಡಿಮ ಪ್ರತಿಷ್ಠಾನ ವತಿಯಿಂದ ಸಹಸ್ರಾರು ಗಾಯಕರಿಂದ ಕನ್ನಡ ಹಾಡುಗಳು ಪಂಚ ಪ್ರಕಾರಗಳಲ್ಲಿ ಕನ್ನಡ ನಾಡ ಗೀತೆಗಳು, ದಾಸರ ಪದಗಳು, ಶಿವಶರಣರ ಹಾಡುಗಳು, ಕಗ್ಗ ತತ್ವಪದಗಳು, ಜಾನಪದಗಳ ‘ಸಹಸ್ರ ಕಂಠ ಗಾನ ವೈಭವ’ ಎಂಬ ಕಾರ್ಯಕ್ರಮವು ಗ್ಲೋಬಲ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ಮತ್ತು ‘ಕನ್ನಡ ಡಿಂಡಿಮ 2025 ಪ್ರಶಸ್ತಿಯನ್ನುಪದ್ಮಭೂಷಣ ಡಾ|| ರಾಜ್ ಕುಮಾರ್ರವರಿಗೆ ಮರಣೋತ್ತರವಾಗಿ ನೀಡಲಾಗುವುದು.
ಪ್ರಶಸ್ತಿ ಪ್ರಧಾನಶ್ರೀ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ಡಾ|| ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಅವಧೂತ ವಿನಯ್ ಗುರೂಜಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ,ಶ್ರೀಮತಿ ಗೀತಾ ಶಿವರಾಜ್ ಕುಮಾರ್ , ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜುರವರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ನಟ ಭಾರ್ಗವರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಶ್ರೀ ಶ್ರೀ ಶ್ರೀ ವಿಶ್ವಸಂತೋಷಭಾರತಿ ಶ್ರೀಪಾದರು ಮಾತನಾಡಿ ಡೊಡ್ಡ ಹೆಸರು ಮಾಡಿರುವ ಶಿವರಾಜ್ ಕುಮಾರ್ ರವರು ಅತ್ಯಂತ ವಿನಯತೆ,ಸರಳ ವ್ಯಕ್ತಿತ್ವದವರು, ತಂದೆಗೆ ತಕ್ಕ ಮಗನಾಗಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲು ಕುವೆಂಪುರವರಿಗೆ ಕೊಡಬೇಕು ಎಂದು ಡಾ.ರಾಜ್ ಕುಮಾರ್ ರವರು ಹೇಳಿದರು.
ರಾಜ್ ಕುಮಾರ್ ಹೆಸರಿಗೆ ಅವರೇ ಸಾಟಿ, ಗಾನಗಂಧರ್ವ ಎಂಬ ಹೆಸರು ಗಳಿಸಿದ್ದಾರೆ. ದೇವಿ ಸರಸ್ವತಿ, ಶಾರದೆ ಅವರಿಗೆ ಒಲಿದಿದ್ದರು. ದೇವರುಗಳು ಪಾತ್ರ ಅಚ್ಚುಕಟ್ಟಾಗಿ ನಟಿಸಿದರು ಎಂದು ಹೇಳಿದರು.ಅವಧೂತ ವಿನಯ್ ಗುರೂಜೀರವರು ಮಾತನಾಡಿ ಭಾರತಮಾತೆ ಕರ್ನಾಟಕ ಮಾತೆಗೆ ಪೂಜೆ ಸಲ್ಲಿಸುತ್ತೇವೆ. ಕನ್ನಡ ಭಾಷೆ ವಿಶ್ವ ಭಾಷೆಯಾಗಬೇಕು ಈ ನಿಟ್ಟಿನಲ್ಲಿ ಸಂತೋಷಭಾರತಿ ಶ್ರೀಗಳು ಶ್ರಮಿಸುತ್ತಿದ್ದಾರೆ.ಕರ್ನಾಟಕದ ಮಾಣಿಕ್ಯ ಶಿವರಾಜ್ ಕುಮಾರ್ ರವರು. ಕನ್ನಡ ಯಜ್ಞವನ್ನು ಮಾಡಲಾಗುತ್ತಿದೆ. ಕನ್ನಡ ಭಾಷೆ ಜೀವಂತವಾಗಿ ಇಟ್ಟವರು ಕಲಾವಿದರುಗಳು, ಡಾ.ರಾಜ್ ಕುಮಾರ್ ರವರು ಮೇರುನಟರಾಗಿದ್ದಾರೆ. ಪ್ರತಿಯೊಬ್ಬ ಕನ್ನಡ ಚಲನಚಿತ್ರವನ್ನು ವೀಕ್ಷಣೆ ಕಲಾವಿದರಿಗೆ ಪ್ರೋತ್ಸಾಹ ನೀಡಿ ಎಂದು ಹೇಳಿದರು.
ಶಿವರಾಜ್ ಕುಮಾರ್ ರವರು ಮಾತನಾಡಿ ಅಪ್ಪಾಜಿರವರಿಗೆ ಕನ್ನಡ ಡಿಂಡಿಮ ಕೊಟ್ಟಿರುವುದು ಸಂತೋಷದ ಸಂಗತಿಯಾಗಿದೆ. ಹಾಡು ಹಾಡಲು ಯಾವುದೇ ವಯಸ್ಸು ಅಡ್ಡಿಬರುವುದಿಲ್ಲ ಗೃಹಿಣಿಯರು ಮನೆ ಬೆಳುಗುತ್ತಾರೆ ಎಂದು ಹೇಳಿದರು.
ನಾವು ಆಡುವ ನುಡಿಯೆ ಕನ್ನಡ ನುಡಿ ಮತ್ತು ಆಕಾಶವೆ ಬೀಳಲಿ ಮೇಲೆ ಮತ್ತು ಕನ್ನಡದ ಮಾತು ಚನ್ನ ಚಲನಚಿತ್ರಗೀತೆಗಳನ್ನು ಶಿವರಾಜ್ ಕುಮಾರ್ ಹಾಡಿದರು.
ಗಾಯನ ಕಾರ್ಯಕ್ರಮದಲ್ಲಿ ಗಾಯಕರುಗಳಾದ ಕಿಕ್ಕೇರಿ ಕೃಷ್ಣಮೂರ್ತಿ, ಪ್ರವೀಣಿ ಡಿ.ರಾವ್, ಮಂಜೇಶ್, ಗಣೇಶ್ ಪ್ರಸಾದ್, ಸವಿತಕ್ಕ ಮತ್ತು 3 ಸಾವಿರ ಗೃಹಿಣಿಯರಿಂದ ಗೀತೆಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.

