ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶಾಸಕರ ಸಂಪರ್ಕ ಕಛೇರಿ ಅವರಣದಲ್ಲಿ 40ನೇ ಜನರೊಂದಿಗೆ ಜನಸೇವಕ, ಜನಸ್ಪಂದನಾ ಕಾರ್ಯಕ್ರಮ ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜರುಗಿತು.
ಜಿಬಿಎ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಜನರೊಂದಿಗೆ ಜನಸೇವಕ 40ವಾರಗಳು ಮತ್ತು ದಿನಕ್ಕೂಂದು ವಾರ್ಡ್ 41ದಿನಗಳ ಕಾಲ ಯಶ್ವಸಿಯಾಗಿ ಸಾಗಿ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೇ.
34ವರ್ಷದ ಯುವಕನಿಗೆ ಕಿಡ್ನಿ ಡಯಾಲಿಸಿಸ್ ಒಳಗಾಗಿ ಚಿಕಿತ್ಯೆ ಪಡೆಯುತ್ತಿದ್ದ, ಕಳೆದ ಒಂದು ವರ್ಷದಿಂದ ಲಕ್ಷಾಂತ ರೂಪಾಯಿ ಖರ್ಚು ಮಾಡಿದ್ದರು. ಇದರ ಬಗ್ಗೆ ನಮಗೆ ಸಲ್ಲಿಸಿದ ತಕ್ಷಣ ಯುವಕನಿಗೆ ಬಿಪಿಎಲ್.ಕಾರ್ಡ್ ವ್ಯವಸ್ಥೆ ಹಾಗೂ ವಿಕ್ಟೋರಿಯ ಆಸ್ಪತ್ರೆ ಉನ್ನತ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಬಿಪಿಎಲ್ ಕಾರ್ಡ್ ಇರುವುದರಿಂದ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯಬಹುದು ಮತ್ತು ಉದ್ಯೋಗ ಮಾಡಲು ಈಗಾಗಲೇ ಕ್ರಮವಹಿಸಲಾಗಿದೆ ಜೀವನೋಪಾಯಕ್ಕೆ ದಾರಿಯಾಯಿತು.
ನರದೌರ್ಬಲ್ಯನಿಂದ ನರಳುತ್ತಿರುವ ಯುವಕನಿಗೆ ಒಂದು ವರ್ಷಕ್ಕೆ ಬೇಕಾದ ಔಷಧಿಗಳನ್ನು ನೀಡಲಾಗುತ್ತಿದೆ. ಜನರೊಂದಿಗೆ ಜನಸೇವಕ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಾಕ್ಷಿಯಾಗಿದೆ.
ಮಕ್ಕಳ ಆರೋಗ್ಯ ಸಮಸ್ಯೆ, ಖಾತ ನೋಂದಾಣಿ, ನೀರಿನಪೂರೈಕೆ, ಪೌರ ಕಾರ್ಮಿಕರ ನೇಮಕಾತಿ ಸಮಸ್ಯೆ ಮತ್ತು ಮರದಕೊಂಬೆ ತೆರವುಗೊಳಿಸುವ , ಪಿಂಚಣಿ ಸಂಭಂದಿಸಿದ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಲು ಮನವಿ ಮತ್ತು ಕ್ರಮಕೈಗೊಳ್ಳಲು ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯರುಗಳಾದ ಹೆಚ್.ಆರ್.ಕೃಷ್ಣಪ್ಪ, ರಾಜಣ್ಣ, ದೀಪಾನಾಗೇಶ್, ವಿಜಯಕುಮಾರ್ ಮತ್ತು ಬಿಜೆಪಿ ಮುಖಂಡರುಗಳಾದ ಸುದರ್ಶನ್, ಗಿರೀಶ್ ಗೌಡ, ಕಾಮಧೇನು ಸುರೇಶ್, ರಾಕೇಶ್,ಕೇಶವಮೂರ್ತಿ, ವಿಶ್ವನಾಥ್,ಅಮಿತ್ ಜೈನ್, ಸಂಜಯ್ ಕುಮಾರ್ ರವರು ಬಿಜೆಪಿ ಪಕ್ಷದ ಪ್ರಮುಖ ಮುಖಂಡರುಗಳು ಪಾಲ್ಗೊಂಡಿದ್ದರು.

