ನಾಯಕನಾಗಿ ಒಂದು ವರ್ಷದಲ್ಲಿ 5 ಟೆಸ್ಟ್‌ ಶತಕ ಬಾರಿಸಿದ ಶುಭಮನ್‌ ಗಿಲ್‌

ನಾಯಕನಾಗಿ ಒಂದು ವರ್ಷದಲ್ಲಿ 5 ಟೆಸ್ಟ್‌ ಶತಕ ಬಾರಿಸಿದ ಶುಭಮನ್‌ ಗಿಲ್‌ ನಾಯಕನಾಗಿ ಒಂದು ವರ್ಷದಲ್ಲಿ 5 ಟೆಸ್ಟ್‌ ಶತಕ ಬಾರಿಸಿದ ಶುಭಮನ್‌ ಗಿಲ್‌

ನಾಯಕನಾಗಿ ಒಂದು ವರ್ಷದಲ್ಲಿ 5 ಟೆಸ್ಟ್‌ ಶತಕ ಬಾರಿಸಿದ ಶುಭಮನ್‌ ಗಿಲ್‌

ಭಾರತದ ನಾಯಕ ಶುಭ್ಮನ್ ಗಿಲ್ ಅವರು ತಮ್ಮ ಸ್ವದೇಶಿ ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಾಯಕನಾಗಿ ಗಿಲ್ ತಮ್ಮ ಮೊದಲ ಟೆಸ್ಟ್ ಶತಕ ಪೂರೈಸಿದ್ದಾರೆ. ಈ ಮೂಲಕ ಅವರು ನಾಯಕನಾಗಿ ಈ ವರ್ಷದ ಐದನೇ ಟೆಸ್ಟ್ ಶತಕ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಸರಿಗಟ್ಟಿದ ಗಿಲ್, ಗಣ್ಯ ಆಟಗಾರರ ಸಾಲಿಗೆ ಸೇರಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕಳೆದ 14 ಟೆಸ್ಟ್ ಪಂದ್ಯಗಳಲ್ಲಿ 25 ಶತಕಗಳು ದಾಖಲಾಗಿರುವುದು ವಿಶೇಷ.
ಭಾರತ ಕ್ರಿಕೆಟ್‌ ತಂಡದ ನಾಯಕ ಶುಭ್ಮನ್ ಗಿಲ್ ಅವರು ತಮ್ಮ ಚೊಚ್ಚಲ ಸ್ವದೇಶಿ ಟೆಸ್ಟ್ ಸರಣಿಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಟೆಸ್ಟ್‌ ನಾಯಕನಾಗಿ ಶುಭಮನ್‌ ಗಿಲ್‌ ಅವರು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಗಿಲ್ ಅವರು ಟೆಸ್ಟ್ ಮಾದರಿಯಲ್ಲಿ ಭಾರತದಲ್ಲಿ ತಮ್ಮ ಮೊದಲ ಶತಕವನ್ನು ಪೂರೈಸಿದ್ದಾರೆ. ಶನಿವಾರದಂದು ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಗಿಲ್, 177 ಎಸೆತಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಈ ಶತಕದೊಂದಿಗೆ ಈ ವರ್ಷ ತಮ್ಮ ಐದನೇ ಟೆಸ್ಟ್ ಶತಕವನ್ನು ಗಳಿಸಿದ ಭಾರತದ ನಾಯಕ ಎಂಬ ಹೆಗ್ಗಳಿಕೆಗೂ ಶುಭಮನ್‌ ಗಿಲ್‌ ಪಾತ್ರರಾಗಿದ್ದಾರೆ. ಈ ಶತಕದ ಮೂಲಕ ವಿರಾಟ್ ಕೊಹ್ಲಿ ಅವರ ಅಪರೂಪದ ಸಾಧನೆಯನ್ನು ಸರಿಗಟ್ಟಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಯಕನಾಗಿ ಐದು ಟೆಸ್ಟ್ ಶತಕ ಬಾರಿಸಿದ ಭಾರತದ ಎರಡನೇ ನಾಯಕ ಇವರಾಗಿದ್ದಾರೆ.

Leave a Reply

Your email address will not be published. Required fields are marked *